ವಿಜಯನಾರಸಿಂಹ
ವಿಜಯ ಭಾಸ್ಕರ್

ಬಾರೆ ಬಾರೆ ಚೆಂದದ ಚೆಲುವಿನ ತಾರೆ

ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ || ಪ ||

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ

ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ

ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ

ಮೌನ ಗೌರಿಯ ಮೋಹದ ಕೈ ಬಿಡಲಾರೆ

ಬಾರೇ ಬಾರೇ ಚೆಂದದ ಚೆಲುವಿನ ತಾರೆ

ಒಲವಿನ ಚಿಲುಮೆಯ ಧಾರೆ || ೧ ||

ಕೈಬಳೆ ನಾದದ ಗುಂಗನು ಅಳಿಸಲಾರೆ

ಮೈಮನ ಸೋಲುವ ಮತ್ತನು ಮರೆಯಲಾರೆ

ರೂಪಸಿ ರಂಭೆಯ ಸಂಗವ ತೊರೆಯಲಾರೆ

ಮೌನ ಗೌರಿಯ ಮೋಹದ ಕೈ ಬಿಡಲಾರೆ

ಬಾರೇ ಬಾರೇ ಚೆಂದದ ಚೆಲುವಿನ ತಾರೆ

ಒಲವಿನ ಚಿಲುಮೆಯ ಧಾರೆ || ೨ ||

ನಾಗರ ಹಾವು

ಚಿತ್ರ ನೋಡಿ